ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ (ಆರ್.ವೀ.ಸೀ.ಈ) ಬೆಂಗಳೂರಿನ ಮ್ಯಸೊರು ರಸ್ತೆಯಲ್ಲಿರುವ ಒಂದು ತಾಂತ್ರಿಕ ಮಹಾವಿದ್ಯಾಲಯ. ಈ ಮಹಾವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಳಗೆ ಸ್ವಾತಂತ್ರ ಹೊಂದಿದೆ. ೧೯೬೩ ವರುಷದಲ್ಲಿ ಸ್ಥಾಪಿಸಲಾದ ಈ ಮಹಾವಿದ್ಯಾಲಯ ಬೀ.ಈ, ಬೀ.ಆರ್ಕ್, ಎಂ.ಟೆಕ್, ಎಂ.ಆರ್ಕ್ ಹಾಗೂ ಎಂ.ಸೀ.ಎ ಪದವಿಗಳನ್ನು ನೀಡುತ್ತದೆ. == ಜಾಗ == ಮಹಾವಿದ್ಯಾಲಯವು ವೃಷಭಾವತಿ ನದಿಯ ದಡದಲ್ಲಿ ಇದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ೮ ಮೈಲಿಗಳ ದೊರದಲ್ಲಿದೆ. ೫೨ ಎಕರೆಗಳ ಪ್ರದೇಶದಲ್ಲಿ ಹರಡಿದೆ. == ವಿಭಾಗಗಳು == === ಪದವಿ === ವಿದ್ಯುನ್ಮಾನ ಮತ್ತು ಸಂವಹನ ( ) ಗಣಕ ವಿಜ್ಞಾನ ( ) ಮಾಹಿತಿ ವಿಜ್ಞಾನ ( ) ಜೈವಿಕ ತಂತ್ರಜ್ಞಾನ () ಸಿವಿಲ್ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ ಸಾಧನಿಕ ತಂತ್ರಜ್ಞಾನ ( ) ಇಂಡಸ್ಟ್ರಿಯಲ್ ತಂತ್ರಜ್ಞಾನ === ಸ್ನಾತಕೋತ್ತರ === ಗಣಕ ವಿಜ್ಞಾನದಲ್ಲಿ ಎಂ.ಟೆಕ್ ಗಣಕ ವಿಜ್ಞಾನದಲ್ಲಿ ಎಂ.ಸಿ.ಎ ಎಂ. ಆರ್ಕ್ == ಪ್ರವೇಶ == ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ. == ವಿದ್ಯಾರ್ಥಿನಿಲಯಗಳು == ವಿದ್ಯಾರ್ಥಿನಿಲಯ ವಿದ್ಯಾರ್ಥಿನಿಯರ ಹಾಸ್ಟೆಲ್ == ವಿದ್ಯಾರ್ಥಿವೇತನ == ಅರ್ಹತೆ ವಿದ್ಯಾರ್ಥಿವೇತನ ರಕ್ಷಣಾ ವಿದ್ಯಾರ್ಥಿವೇತನ ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ ಯೋಜನೆ ವಿದ್ಯಾರ್ಥಿವೇತನ ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ ಮಾಜಿ ರಕ್ಷಣಾ ವಿದ್ಯಾರ್ಥಿವೇತನ ಅಂಗವಿಕಲರ ವಿದ್ಯಾರ್ಥಿವೇತನ == ಜೀವನ ಮಾರ್ಗದರ್ಶನ ಕೇಂದ್ರ == ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ. == ಸೌಲಭ್ಯಗಳು == ಈ ಮಹಾವಿದ್ಯಾಲಯದಲ್ಲಿ ೧೨ ವಿಭಾಗಗಳು ಇವೆ. ಮುಖ್ಯ ಗ್ರಂಥಾಲಯವಲ್ಲದೆ ಪ್ರತೀ ವಿಭಾಗಕ್ಕೂ ತನ್ನದೇ ಒಂದು ಗ್ರಂಥಾಲಯವಿದೆ.